ಫಾರ್ನಾಕ್ಸ್
	ದಕ್ಷಿಣ ಆಕಾಶದ ಪ್ರಧಾನ ನಕ್ಷತ್ರ ಪುಂಜಗಳ ಪೈಕಿ ಒಂದು. ವಿಷುವದಂಶ 2 ಗಂ 49 ಮಿ; ಘಂಟಾವೃತ್ತಾಂಶ 320 ದ. ಸೀಟಸ್ ಮತ್ತು ಇರಿಡನಸ್ ಪುಂಜಗಳ ದಕ್ಷಿಣಕ್ಕೆ ಇದೆ. ನಾಲ್ಕನೆಯ ಕಾಂತಿಮಾನಕ್ಕಿಂತ ಮಿಗಿಲಾದ ಒಂದೇ ನಕ್ಷತ್ರ ಎಂದರೆ ( (3.85). ಕೆಲವೊಂದು ಯಮಳ ಹಾಗೂ ಚರಕಾಂತೀಯ ನಕ್ಷತ್ರಗಳು ಇವೆ. ಈ ಪುಂಜದಲ್ಲಿ ಹಲವು ಬ್ರಹ್ಮಾಂಡೀಯ ನೀಹಾರಿಕೆಗಳಿವೆ.( NGC 986, NGC 1097, NGC 1201, NGC 1302, NGC 1326, NGC 1344, NGC 1350, NGC 1365, NGC 1380, NGC 138, NGC 1399, NGC 1398, NGC 1404). ಪ್ರಾಚೀನ ರೋಮನ್ ಪುರಾಣದ ರೀತ್ಯ, ಅಡುಗೆಯ ಅಧಿದೈವ ಫಾರ್ನಕೇಲಿಯದ ಗೌರವಾರ್ಥ ಇದನ್ನು ಫಾರ್ನಾಕ್  ಕೆಮಿಕೆ ನಕ್ಷತ್ರಪುಂಜ ಎಂದು ಕರೆದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ